ಸ್ಪರ್ಧಾ ಮನೆ

ನಮಸ್ಕಾರ ಗೆಳೆಯರೇ,
ಇಲ್ಲಿ ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು, ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು, ಮತ್ತಿತರ ಉತ್ತಮವಾದಂತಹ ಮಾಹಿತಿಗಳನ್ನು ಕಾಣುವಿರಿ.

Friday, 4 September 2020

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

 

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನ ಸಾಧನೆಗಾಗಿ ಕೇಂದ್ರ ಸರಕಾರವು ನೀಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಪ್ರಶಸ್ತಿಯ ಆರಂಭ

ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ನೀಡಲು ಆರಂಭಿಸಿದ್ದು 1969ರಲ್ಲಿ. ದಾದಾ ಸಾಹೇಬ್ ಫಾಲ್ಕೆ (1870-1944) ಅವರು ಭಾರತ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಹೆಸರಿನಲ್ಲಿಯೇ ಈ ಪ್ರಶಸ್ತಿಯನ್ನು ನೀಡಲು ಆರಂಭಿಸಿತ್ತು. ಫಾಲ್ಕೆ ಅವರನ್ನು ಭಾರತೀಯ ಚಿತ್ರರಂಗದ ಪಿತಾಮಹ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಫೀಚರ ಫಿಲ್ಮ ಅನ್ನು ನಿರ್ದೇಶಿಸಿದವರು ಇವರಾಗಿದ್ದಾರೆ. 1913ರಲ್ಲಿ ತೆರೆಕಂಡ ’ರಾಜಾ ಹರಿಶ್ಚಂದ್ರ’ ಚಿತ್ರವನ್ನು ಫಾಲ್ಕೆ ಅವರು ನಿರ್ದೇಶಿಸಿದ್ದಾರೆ.

ಪ್ರಶಸ್ತಿಯ ಕುರಿತು

ಸಿನಿಮಾ ರಂಗದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಪರಮೋಚ್ಚ ಪ್ರಶತಿಯಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದಡಿ ಬರುವ ಫಿಲ್ಮ್ ಫೆಸ್ಟಿವಲ್ಸ್ ನಿರ್ದೇಶನಾಲಯವು ಪ್ರತಿವರ್ಷ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡುತ್ತದೆ. ಈ ಪ್ರಶಸ್ತಿಯು ಒಂದು ’ಸ್ವರ್ಣ ಕಮಲ’ (ಚಿನ್ನದ ತಾವರೆ)ಯ ಫಲಕ ಮತ್ತು 10 ಲಕ್ಷ ರೂ. ನಗದು ಬಹುಮಾನ ಹೊಂದಿದೆ.

ಪ್ರಶಸ್ತಿ ಪಡೆದವರು

ಮೊದಲ ಬಾರಿ ಈ ಪ್ರಶಸ್ತಿಯನ್ನು ಪಡೆದವರು ನಟಿ ದೇವಿಕಾ ರಾಣಿ. 17ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಮೊದಲ ಭಾರಿಗೆ ಈ ಪ್ರಶಸ್ರಿಯನ್ನು ನೀಡಲಾಯಿತು. ನಟ ಪ್ರಥ್ವಿರಾಜ್ ಕಪೂರ್ ಅವರಿಗೆ ಫಾಲ್ಕೆ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ. ತಂದೆಯ ಪರವಾಗಿ ಈ ಪ್ರಶಸ್ತಿಯನ್ನು ರಾಜ್ ಕಪೂರ ಪಡೆದರು.

ರಾಜ್ ಕಪೂರ್ ಗೂ 1987ರಲ್ಲಿ ಈ ಪ್ರಶಸ್ತಿ ಲಭಿಸಿದೆ. ಉಳಿದಂತೆ ಬೊಮ್ಮಿರೆಡ್ಡಿ ನರಸಿಂಹರೆಡ್ಡಿ(1974) ಮತ್ತು ಬೊಮಿರೆಡ್ಡಿ ನಾಗಿ ರೆಡ್ಡಿ(1986) ಸಹ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಶಿಕಪೂರ್(2014), ಲತಾ ಮಂಗೇಶ್ಕರ್(1989), ಆಶಾ ಭೋಂಸ್ಲೆ(2000), ಬಲದೇವ್ ರಾಜ್ ಚೋಪ್ರಾ(1998),  ಯಶ್ ಚೋಪ್ರಾ(2001), ದೇವ್ ಆನಂದ್(2002), ಮೃನಲ್ ಸೇನ್(2003), ಅಡೂರ್ ಗೋಪಾಲ ಕೃಷ್ಣನ್(2004), ಶ್ಯಾಮ್ ಬೆನಗಲ್(2005), ತಪನ್ ಸಿನ್ಹಾ(2006), ಮನ್ನಾ ಡೇ(2007), ವಿ.ಕೆ.ಮೂರ್ತಿ(2008), ಗುಲ್ಜರ್(2013), ಶಶಿ ಕಪೂರ್(2014), ವಿನೋದ್ ಖನ್ಹಾ(2017) ಸೇರಿದಂತೆ ಇಲ್ಲಿಯವರೆಗೆ ಒಟ್ಟು 66 ಪ್ರತಿಭಾನ್ವಿತರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ.

ಕನ್ನಡಕ್ಕೂ ಫಾಲ್ಕೆ

ಕನ್ನಡದ ಶ್ರೇಷ್ಟ ನಟರಾದ ಡಾ. ರಾಜ್ ಕುಮಾರ ಅವರಿಗೂ ಪ್ರತಿಷ್ಟಿತ ದಾದಾ ಸಾಹೇಬ್  ಫಾಲ್ಕೆ ಪ್ರಶಸ್ತಿ ಲಬಿಸಿದೆ. ಇವರಿಗೆ 1992ರಲ್ಲಿ 43ನೇ ಫಾಲ್ಕೆ ಪ್ರಶಸ್ತಿ ದೊರಕಿತ್ತು. ಇದರ ಜೊತೆಗೆ ಅದೇ ಸಮಯದಲ್ಲಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ರಾಜ್ ಪಡೆದಿದ್ದರು.

 

No comments:

Post a Comment