ಸ್ಪರ್ಧಾ ಮನೆ

ನಮಸ್ಕಾರ ಗೆಳೆಯರೇ,
ಇಲ್ಲಿ ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು, ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು, ಮತ್ತಿತರ ಉತ್ತಮವಾದಂತಹ ಮಾಹಿತಿಗಳನ್ನು ಕಾಣುವಿರಿ.

Saturday, 17 August 2019

ಪೆರೋಲ್

ಪೆರೋಲ್

ಅತ್ಯಾಚಾರ ಪ್ರಕರಣದಲ್ಲಿ ಪಂಜಾಬ್ ನ ರೋಹ್ಟಕ್ ಕಾರಾಗೃಹ ಸೇರಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಪೆರೋಲ್ ಸಲ್ಲಿಸಿರುವ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಪೆರೋಲ್ ಎಂದರೇನು ತಿಳಿದುಕೊಳ್ಳೋಣ ಬನ್ನಿ.

ಸುದ್ದಿ ಏನು?

ತಾಯಿ ನಾಸಿಬ್ ಕೌರ್ (83) ಅವರ ಆರೋಗ್ಯಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿ ತಲುಪಿದ್ದಾರೆ. ಅವರನ್ನು ನೋಡುವ ಅಪೇಕ್ಷೆಯಿಂದ ಪೆರೋಲ್ ನೀಡಬೇಕೆಂದು ಗುರ್ಮಿತ್ ಅರ್ಜಿ ಸಲ್ಲಿಸಿದ್ದರು. ಅನುಯಾಯಿಗಳು ಭದ್ರತೆಗೆ ಧಕ್ಕೆ ತರುವ ಸಾಧ್ಯತೆಗಳಿವೆ ಎಂಬ ಜೈಲು ಅಧೀಕ್ಷಕರ ವರದಿ ಆಧರಿಸಿ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

ಪೆರೋಲ್ ಎಂದರೇನು?

ಪೆರೋಲ್ ಎಂದರೆ ಕೈದಿಯನ್ನು ಜೈಲಿನಲ್ಲಿ ಇರುವಾಗಲೇ ಅರ್ಹ ಕಾರಣದ ಮೇಲೆ ಹಾಗೂ ಆತನ ಉತ್ತಮ ನಡತೆಯನ್ನು ಆಧರಿಸಿ ಷರತ್ತಿನ ಮೇಲೆ ಜೈಲಿನಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡುವುದನ್ನು ಪೆರೋಲ್ ಎಂದು ಕರೆಯಲಾಗುತ್ತದೆ. ವಿಡಿಯೋ ಪೆರೋಲ್ ಮೇಲೆ ಹೊರಗಿರುವಾಗಲೂ ನಿರ್ದಿಷ್ಟ ದಿನಗಳಂದು ಜೈಲಿಗೆ ಬಂದು ರಿಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ.


ಪೆರೋಲ್ ಪದದ ಮೂಲ

ಪೆರೋಲ್ ಪದವು ಫ್ರೆಂಚ್ ಭಾಷೆಯಿಂದ ಹುಟ್ಟಿಕೊಂಡಿದೆ. ಪೆರೋಲ್ ಎಂದರೆ ಫ್ರೆಂಚ್ ಭಾಷೆಯಲ್ಲಿ ಜೆ ಡೋಣ ಮಾ ಪೆರೋಲ್. ಅಂದರೆ ನಾನು ಮಾತಿಗೆ ತಪ್ಪುವುದಿಲ್ಲ ಎಂದರ್ಥ. ಪೆರೋಲ್ ಪದವನ್ನು ಮೊತ್ತಮೊದಲ ಬಾರಿಗೆ 1847 ರಲ್ಲಿ ಬೋಸ್ಟನ್ ನ ಸಮಾಜ ಸುಧಾರಕ ಸ್ಯಾಮ್ ವೆಲ್ ಜಿ ಹೌ ಬಳಸಿದ್ದರು.

ಯಾವ ಸಂದರ್ಭಗಳಲ್ಲಿ ನೀಡಲಾಗುತ್ತೆ?

  1. ಸಂಪೂರ್ಣ ಮತ್ತು ಗುಣಪಡಿಸಲಾಗದ ಅಂಧತ್ವ ಉಂಟಾದಾಗ ನೀಡಲಾಗುತ್ತದೆ.
  2. ಕೈದಿಯ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ ಅಥವಾ ಸಾವಿಗೆ ಹತ್ತಿರದಲ್ಲಿದ್ದರೆ.
  3. ಕೈದಿ ಯು ಗಂಭೀರ ಕಾಯಿಲೆಗೆ ಒಳಗಾಗಿದ್ದರೆ ಅಥವಾ ಜೈಲಿನಿಂದ ಹೊರಗಿದ್ದರೆ ಆತನ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವ ಸಾಧ್ಯತೆ ಇದ್ದರೆ.
  4. ಕೈದಿಯು ಮಾನಸಿಕವಾಗಿ ಅಸ್ವಸ್ಥನಾಗಿದ್ದ ರೆ ಮತ್ತು ಜೈಲಿನ ಹೊರಗಿದ್ದರೆ ಚಿಕಿತ್ಸೆಯ ಅಗತ್ಯವಿದ್ದರೆ.
  5. ಕೈದಿಯ ಕುಟುಂಬದವರು ಯಾರಾದರೂ ಮೃತಪಟ್ಟಿದ್ದರೆ ಅವರ ಅಂತ್ಯಕ್ರಿಯೆಯನ್ನು ಮಾಡಲು ಹಾಗೂ ಪಾಲ್ಗೊಳ್ಳಲು.
  6. ಮಗ, ಮಗಳು, ಸಹೋದರ, ಸಹೋದರಿಯ ಮದುವೆಯಂತಹ ಪ್ರಮುಖ ಸಮಾರಂಭಗಳಲ್ಲಿ ಪಾಲ್ಗೊಳ್ಳಲು.
  7. ಕೈದಿಯ ಮನೆಯು ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಅದನ್ನು ದುರಸ್ತಿ ಪಡಿಸಲು ಹೀಗೆ ಪ್ರಮುಖ ಸಂದರ್ಭಗಳಲ್ಲಿ ಮಾತ್ರ ಕೈದಿಗಳಿಗೆ ಪೆರೋಲ್ ಮಂಜೂರು ಮಾಡಲಾಗುತ್ತದೆ.


ಪೆರೋಲ್ ಅವಧಿ

ಸನ್ನಡತೆವುಳ್ಳ ಕೈದಿಯು ಒಂದೇ ಬಾರಿಗೆ 30 ದಿನಗಳವರೆಗೆ ಅಥವಾ ಒಂದು ವರ್ಷದಲ್ಲಿ 90 ದಿನಗಳವರೆಗೆ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಬಹುದಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಕೈದಿಗಳು ಒಂದು ದಿನದ ಮಟ್ಟಿಗೆ ಜೈಲಿನಿಂದ ಬಿಡುಗಡೆಯಾಗುವುದು ಇದೆ. ಅಂತವರುವರು ಅದೇ ದಿನ ರಾತ್ರಿಯೊಳಗೆ ಮತ್ತೆ ಜೈಲಿಗೆ ವಾಪಸಾಗಬೇಕಾಗುತ್ತದೆ.